ಮನಸ್ಸಿನಲ್ಲಿ ಮೂಡಿದ ಅನುಭವಗಳನ್ನು ನನ್ನ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ರಮೇಶ ಎಂ.ಎಚ್.
ನಿರಾತಂಕ
ನಗುತ ಹಲ್ಲು ಕಿರಿಯುವೆ, ಮನದಲ್ಲಿ ನಗುವಿರುವುದಿಲ್ಲ.
ದಯೆ ತೋರುವೆ, ಮನದಲ್ಲಿ ಕರುಣೆ ಇರುವುದಿಲ್ಲ. ಸಂತಸದಲ್ಲಿ ಸಂಭ್ರಮ ಆಚರಿಸುವೆ, ಮನದಲ್ಲಿ ಸಂತಸದ ಭಾವನೆ ಚಿಮ್ಮುವುದಿಲ್ಲ. ಅಳುವಂತೆ ನಟಿಸುವೆ, ಮರುಕ್ಷಣ ಸಂತಸದ ನಗು ಚೆಲ್ಲುವೆ. ಎಲ್ಲವೂ ಅನಿವಾರ್ಯ ಎನ್ನುವೆ, ತಲೆ ಹೋಗುವಂತಹದೇನಿರುವುದಿಲ್ಲ. ಭ್ರಮೆ, ನಶೆಯ ಬದುಕಿನಲ್ಲಿ ತೇಲುತ ಸಮಯ ಕಳೆಯುತಲಿರುವ ಹುಚ್ಚು ಬದುಕಿನ ಬೆನ್ನು ಹತ್ತಿ ಸವಾರಿ ಹೊರಟಿರುವೆ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ
0 Comments
Leave a Reply. |