ಮನಸ್ಸಿನಲ್ಲಿ ಮೂಡಿದ ಅನುಭವಗಳನ್ನು ನನ್ನ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ರಮೇಶ ಎಂ.ಎಚ್.
ನಿರಾತಂಕ
0 Comments
ಇತ್ತೀಚೆಗೆ ಪ್ರೊ. ವೆಂಕಟ್ ಪುಲ್ಲಾ ಭಾರತದಲ್ಲಿ ಸಮಾಜಕಾರ್ಯ ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಆಸ್ಟ್ರೇಲಿಯಾದಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ (ಸುಮಾರು 90ರ ದಶಕದಲ್ಲಿ) TISS (Tata Institute of Social Science) ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಒಬ್ಬ ಅರ್ಹ ವಿದ್ಯಾರ್ಥಿಗೆ 500/- ಗಳ ಸಹಾಯವನ್ನು ನೀಡಿದ್ದರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಗೂ ಬರುತ್ತಿದ್ದ ಸಂಬಳ ಐದಾರು ಸಾವಿರವಿದ್ದಿರಬಹುದು. ಆ 500/- ರೂ.ಗಳು ಸಹಾಯ ಪಡೆದ ವಿದ್ಯಾರ್ಥಿ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಪಡೆದ ನಂತರ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಪಡೆದ ಸಹಾಯಧನವನ್ನು ಹಿಂತಿರುಗಿಸಲು ಭೇಟಿಯಾದರು. ಆಗ ಪ್ರೊ. ವೆಂಕಟ್ ಪುಲ್ಲಾ ರವರು ನಾನು ನಿನಗೆ ಸಹಾಯ ಮಾಡಿದಂತೆ ನೀನು ಒಬ್ಬ ಅರ್ಹ ವಿದ್ಯಾರ್ಥಿಯನ್ನು ಹುಡುಕಿ ಅವನಿಗೆ ನಿನ್ನ ಕೈಲಾದ ಮಟ್ಟಿಗೆ ಸಹಾಯ ಮಾಡು ಎಂದು ಸಲಹೆ ಇತ್ತರಂತೆ. ಈ ರೀತಿಯಾಗಿ ಸಹಾಯ ಪಡೆದವರು ಇಂದು ವಿಶ್ವದಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಂದಿ ಇದ್ದಾರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಂದ ಮೊದಲು ಸಹಾಯ ಪಡೆದ ವ್ಯಕ್ತಿ ತಾನು ಸಹಾಯ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿ ಅದೇ ರೀತಿ ಒಬ್ಬರಿಂದ ಒಬ್ಬರು ಮಾತನಾಡಿಕೊಂಡು ಎಲ್ಲರೂ ಇತ್ತೀಚಿಗೊಮ್ಮೆ ಪ್ರೊ. ವೆಂಕಟ್ ಪುಲ್ಲಾ ರವರನ್ನು ಆಹ್ವಾನಿಸಿದರಂತೆ. ಆಗ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಸಹಾಯ ನೀಡಿದ ತನ್ನ ಶಿಷ್ಯ ಮಾತ್ರ ಗೊತ್ತಿತ್ತು. ಅದೇ ರೀತಿ ಅಲ್ಲಿದ್ದ ಎಲ್ಲರಿಗೂ ಅವರವರು ಸಹಾಯ ನೀಡಿದ ವ್ಯಕ್ತಿಗಳು ಮಾತ್ರ ಗೊತ್ತಿತ್ತು. ಆದರೆ ಅಲ್ಲಿ ಒಟ್ಟಿಗೆ ಸೇರಿದ್ದು 300 ಕ್ಕೂ ಹೆಚ್ಚು ಜನರು ಇದ್ದರು. ಪ್ರೊ. ವೆಂಕಟ್ ಪುಲ್ಲಾ ರವರು ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರಂತೆ. ಒಂದು ಪುಟ್ಟ ಸಹಾಯ ಯಾವ ರೀತಿ ಇತರರ ಬದುಕನ್ನು ಬದಲಾಯಿಸಬಲ್ಲದು ಎಂಬುದು ಇದಕ್ಕೆ ನಿದರ್ಶನವಾಗಿದೆ. ಹಾಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಒಂದು ಪುಟ್ಟ ಸಹಾಯದಿಂದ ಸುಮಾರು 400 ಕ್ಕೂ ಹೆಚ್ಚು ಜನರು ಪ್ರೊ. ವೆಂಕಟ್ ಪುಲ್ಲಾ ರವರ ವ್ಯಕ್ತಿತ್ವಕ್ಕೆ ಮಾರುಹೋದರು. ಹಾಗೆಯೇ ಇಂದು ಪ್ರೊ. ವೆಂಕಟ್ ಪುಲ್ಲಾ ರವರು ಸಮಾಜಕಾರ್ಯ ವಿಶ್ವವಿದ್ಯಾಲಯ ಮಾಡಬೇಕೆಂದು ಹೊರಟರೆ ಇಂತಹ ಮಹತ್ವದ ಕೆಲಸಕ್ಕೆ 400 ಜನರು ಪ್ರೊ. ವೆಂಕಟ್ ಪುಲ್ಲಾ ರವರ ಬೆಂಬಲಕ್ಕೆ ನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲವಲ್ಲ.
ರಮೇಶ ಎಂ.ಎಚ್. ನಿರಾತಂಕ www.mhrspl.com www.nirutapublications.org ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಮೊದಲನೆಯ ಸಲ ರಾಷ್ಟ್ರಪತಿ ಆದ ನಂತರ ತನ್ನ ಸುರಕ್ಷೆಯ ಸೈನಿಕರ ಜೊತೆಯಲ್ಲಿ ಒಂದು ಹೊಟೇಲಿಗೆ ಊಟ ಮಾಡುವುದಕ್ಕೆ ಹೋಗಿದ್ದರು. ಎಲ್ಲರೂ ತಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಿದರು. ಅದೇ ಸಮಯದಲ್ಲಿ ಮಂಡೇಲಾ ಅವರ ಕುರ್ಚಿಯ ಎದುರುಗಡೆ ಒಬ್ಬ ವ್ಯಕ್ತಿ ಊಟಕ್ಕೆ ಅಪ್ಪಣೆ ಕೊಟ್ಟು ಎದುರು ನೋಡುತ್ತಿದ್ದನು. ನೆಲ್ಸನ್ ಮಂಡೇಲಾರವರು ತನ್ನ ಸುರಕ್ಷೆಯ ಸೈನಿಕರಿಗೆ ಈ ರೀತಿ ಹೇಳಿದರು: “ಆ ವ್ಯಕ್ತಿಯನ್ನು ಕರೆಯಿಸಿ, ಇಲ್ಲಿ ನನ್ನ ಟೇಬಲ್ ಬಳಿಯಲ್ಲಿಯೇ ಕುಳಿತುಕೊಳ್ಳಲಿ.” ಆ ವ್ಯಕ್ತಿ ಬಂದು ನೆಲ್ಸನ್ ಮಂಡೇಲಾರವರ ಎದುರು ಕುಳಿತುಕೊಂಡನು. ಎಲ್ಲರೂ ಊಟ ಮಾಡಲು ಶುರು ಮಾಡಿದರು. ಆ ವ್ಯಕ್ತಿಯೂ ಕೂಡ ಊಟ ಮಾಡಲು ಶುರು ಮಾಡಿದನು. ಆದರೆ ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು. ಬೇಗನೆ ಊಟ ಮಾಡಿದ ಆ ವ್ಯಕ್ತಿ ತಲೆ ತಗ್ಗಿಸಿಕೊಂಡು ಹೊಟೇಲ್‍ನಿಂದ ಹೊರಟು ಹೋದ. ಆ ವ್ಯಕ್ತಿ ಹೊರಗಡೆ ಹೋದ ನಂತರ ಸುರಕ್ಷೆಯ ಅಧಿಕಾರಿ ಮಂಡೇಲಾರನ್ನು ಕೇಳಿದನು: “ಸರ್ ಆತನಿಗೆ ಜ್ವರ ಬಂದಿರಬಹುದು, ಹಾಗಾಗಿ ಊಟ ಮಾಡುವಾಗ ಅವನ ಕೈಗಳು ನಡುಗುತ್ತಿದ್ದವು.” ನೆಲ್ಸನ್ ಮಂಡೇಲಾ ನಸುನಗುತ್ತಾ ಹೇಳಿದರು: “ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದಾನೆ, ರೋಗಗ್ರಸ್ತನಲ್ಲ. ನಾನು ಯಾವ ಜೈಲಿನಲ್ಲಿ ಬಂಧಿಯಾಗಿದ್ದೆನೋ ಆ ಜೈಲಿನ ಜೈಲರ್ ಆಗಿದ್ದವನು ಆ ವ್ಯಕ್ತಿ. ನನಗೆ ಬಹಳ ಹಿಂಸೆ ಕೊಟ್ಟಿದ್ದನು. ನಾನು ಏಟು ತಿಂದೂ ಸುಸ್ತಾಗಿ ನೀರು ಕೇಳಿದಾಗ ಆ ವ್ಯಕ್ತಿ ನೀರು ಬೇಕಾ…? ಕುಡಿ ಎಂದು, ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು. ಈಗ ನಾನು ರಾಷ್ಟ್ರಪತಿ ಆಗಿದ್ದೇನೆ…!! ಆ ವ್ಯಕ್ತಿಗೆ ಮನವರಿಕೆ ಆಗಿದೆ, ತಾನು ಮಾಡಿದ ಕೆಲಸಕ್ಕೆ ಈಗ ತನಗೆ ಭಯಂಕರ ಶಿಕ್ಷೆ ಆಗಬಹುದು ಎಂದು. ಆದರೆ ಅದು ನನ್ನ ಸಂಸ್ಕಾರವಲ್ಲ. ನನಗೆ ಅನಿಸುತ್ತದೆ ದ್ವೇಷದ ಭಾವನೆಯಿಂದ ಕೆಲಸ ಮಾಡಿದರೆ ಅದು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಧೈರ್ಯ ಮತ್ತು ಸಹಿಷ್ಣುತೆ ಇದ್ದರೆ ಮಾನಸಿಕ ಪರಿಪಕ್ವತೆ ಪೂರ್ಣವಾಗಿ ಸಾಧಿಸುತ್ತದೆ.’ ನೋಡಿ! ಎಂತಹ ವ್ಯಕ್ತಿತ್ವ ನೆಲ್ಸನ್ ಮಂಡೇಲಾರದ್ದು. ಮಹಾನ್ ವ್ಯಕ್ತಿಗಳ ಈ ತರಹದ ಕ್ಷಮಾಗುಣ, ಉದಾರತೆಗಳೇ ಅವರನ್ನು ಆ ಮೇರುತನಕ್ಕೆ ಕೊಂಡೊಯ್ಯುವವು ಅಲ್ಲವೆ? Courtesy : Whatsapp ಅನಿವಾರ್ಯವಾಗಿ ನಮ್ಮ ರಾಜಕೀಯದ (ಎಲ್ಲಾ ಪಕ್ಷಗಳಿಗೂ ಅನ್ವಯ) ದೊಂಬರಾಟಗಳನ್ನು ನಾವು ಗಮನಿಸುವುದಾದರೆ ನಾವು ಮೂರ್ಖರ ಆಳ್ವಿಕೆಯಲ್ಲಿ ಬದುಕುತ್ತಿರುವ ಬುದ್ಧಿಜೀವಿಗಳಲ್ಲದಿದ್ದರೂ ಸಾಮಾನ್ಯರಾಗಿದ್ದೇವೆ. ಜನಸಾಮಾನ್ಯರು ಮೌನವಾಗಿ ಕಾಸು ಪಡೆದು, ಮತ ಚಲಾಯಿಸಿದ್ದರ ಪರಿಣಾಮ ಇಂದು ಸರಿಯಾದ ಆರೋಗ್ಯಕರ ಸಮಾಜ, ಆಸ್ಪತ್ರೆಗಳು ನಮಗೆ ಇಲ್ಲವಾಗಿವೆ. ಬರಿ ನಮ್ಮ ಮನೆ, ನಾನು ಸರಿಯಾಗಿ ಕಾಸು ಕೂಡಿಟ್ಟುಕೊಂಡರೆ ಸಾಕು ಎಂದು ಬದುಕಿದ್ದರ ಪ್ರತಿಫಲ ಇಂದು ಕಾಸು ಕೆಲಸಕ್ಕೆ ಬಾರದ ಸಂಗತಿಯಾಗಿದೆ. ಸಣ್ಣ ಸಣ್ಣ ವಿಷಯಗಳಲ್ಲೂ ನಾವು ಅಪ್ರಾಮಾಣಿಕರಾಗಿ ಬದುಕಿದ್ದರ ಫಲ ಪ್ರಕೃತಿ ಇಂದು ಪಾಠ ಕಲಿಸಲು ಮುಂದಾಗಿದೆ. ಪಾಠ ಕಲಿತು ಪ್ರಾಮಾಣಿಕವಾಗಿ ಬದುಕದಿದ್ದರೆ ಮನುಜ ಕುಲದ ವಿನಾಶ ಖಂಡಿತ. ಇತರೆ ಜೀವಿಗಳನ್ನು ಹೊರತುಪಡಿಸಿ ಮನುಜ ಕುಲಕ್ಕೆ ಮಾತ್ರ ಕೊರೋನ ಅಂದರೆ ಮನುಷ್ಯ ಜೀವಿಯಷ್ಟು ಪ್ರಕೃತಿಯಲ್ಲಿ ಇನ್ನೊಂದು ಅಪ್ರಾಮಾಣಿಕ ಜೀವಿಯನ್ನು ನಾವೂ ಕಾಣಲಾರೆವು...
#ನಿರಾತಂಕಕವನ ಶೇಖರ್ ಗಣಗಲೂರು ರವರ ವ್ಯಕ್ತಿತ್ವ ವಿಕಾಸದ ಪುಸ್ತಕ “ಗೆಲುವು” ನಮ್ಮ ನಿರುತ ಪ್ರಕಾಶನದಿಂದ ಇನ್ನೂ ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗುತ್ತಿದೆ. ಶೇಖರ್ ರವರ ಮೊದಲನೆಯ ಪುಸ್ತಕ “ಬದುಕು ಬದಲಾಯಿಸಿದ ಕಥನಗಳು” ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 2000 ಪ್ರತಿಗಳು ಮಾರಾಟವಾಗಿ ಮೂರನೆಯ ಆವೃತ್ತಿಗೆ ಸಜ್ಜುಗೊಂಡಿದೆ. ಶೇಖರ್ ರವರು ತಮ್ಮ ಎರಡನೆಯ ಪುಸ್ತಕದಲ್ಲಿ “ಗೆಲುವಿನ ವಲಯ” ಮತ್ತು “ಗೆಲುವಿನ ವಲಯದ ಸ್ವಯಂ-ಮೌಲ್ಯಮಾಪನದ ಸಾಧನ” ಎಂಬ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುವುದರ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಬಲ್ಲ ಪ್ರಭಲವಾದ 9 ಸಾಧನಗಳನ್ನು ನೀಡಿದ್ದಾರೆ. ಈ ರೀತಿಯ ಸಾಧನಗಳು ಕನ್ನಡದಲ್ಲಿ ಬಹಳ ವಿರಳ ಹಾಗೂ ಇವು ಪ್ರತಿಯೊಬ್ಬರೂ ತಮ್ಮನ್ನು ತಾವು ಅರಿತುಕೊಳ್ಳಲು ದಾರಿದೀಪವಾಗಬಲ್ಲವು. ಶೇಖರ್ ರವರ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವುದು ಶ್ರೀಯುತ ರವಿ ಡಿ. ಚನ್ನಣ್ಣನವರ್ ರವರು. ಇವರಿಗೆ ನಮ್ಮ ನಿರುತ ಪ್ರಕಾಶನದಿಂದ ಹಾಗೂ ಲೇಖಕರ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ರೀತಿಯ ಅಮೂಲ್ಯವಾದ ಕೃತಿಯನ್ನು ಗೆಳೆಯ ಶೇಖರ್ ನಮಗೆ ಪ್ರಕಾಶನ ಮಾಡಲು ನೀಡಿರುವುದಕ್ಕಾಗಿ ಗೆಳೆಯ ಶೇಖರ್ ರವರಿಗೆ ಋಣಿಯಾಗಿದ್ದೇನೆ. ಈ ಪುಸ್ತಕದ ಮುಖಪುಟವನ್ನು ಶ್ರೀಯುತ ಹಾದಿಮನಿ ಯವರು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ಸುಂದರವಾಗಿ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿರುತ ಪ್ರಕಾಶನದ ಪುಸ್ತಕಗಳನ್ನು ಕೊಂಡು ಓದಲು ನಮ್ಮ ವೆಬ್ ಸೈಟ್ ಗೆ ಭೇಟಿ ನೀಟಿ: www.socialworkfootprints.org ನಮ್ಮ ಪುಸ್ತಕದ FACEBOOK GROUP ಗೆ ಸದಸ್ಯರಾಗಿ ಎಲ್ಲ ರೀತಿಯ ಪುಸ್ತಕಗಳ ಕುರಿತು ಮಾಹಿತಿ ಪಡೆದುಕೊಳ್ಳಿ :- https://www.facebook.com/groups/socialworkbooks ರಮೇಶ ಎಂ.ಎಚ್. ನಿರಾತಂಕ ನಾನು ಓದಿದ್ದು ನ್ಯಾಷನಲ್ ಕಾಲೇಜ್ ಬಸವನಗುಡಿಯಲ್ಲಿ. ನಮಗೆ ದಿನನಿತ್ಯ ಎಚ್. ನರಸಿಂಹಯ್ಯ ರವರ ದರ್ಶನವಾಗುತ್ತಿತ್ತು. ಎಚ್.ಎನ್. ಹಾಲ್ ನಲ್ಲಿ ದೊಡ್ಡದಾಗಿ ಅವರ ಒಂದು ವಾಕ್ಯ ಬರೆಸಿದ್ದಾರೆ. "ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ ಎಂದು" ಆದರೆ ಕೆಲವೊಮ್ಮೆ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲ ಎಂಬ ಸತ್ಯದ ಅರಿವಾಗುತ್ತಿದೆ.
ಆದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು. ಯಾರಿಗೋ ಹೆದರಿ ಮನಸ್ಸಿನ ಭಾವನೆ ಹೊರಗೆ ಹಾಕದಿದ್ದರೆ ಹೇಡಿ ಅನಿಸುತ್ತದೆ. ನಮ್ಮ ನಮ್ಮ ಅನುಕೂಲಗಳಿಗೆ ತಕ್ಕಂತೆ ಬದುಕುವುದು ಕಲಿತರೆ ಸಮಾಜ ಹಾಳಾಗುತ್ತದೆ. ಹಾಳಾದ ಸಮಾಜದಲ್ಲಿ ನಮ್ಮ ಮುಂದಿನ ಜನಾಂಗ ಹಾಗೂ ನಮ್ಮದೇ ಮಕ್ಕಳು ಬದುಕಬೇಕಾಗುತ್ತದೆ. ಸತ್ಯಶೋಧನೆಯ ಹುಡುಕಾಟದ ಪ್ರಯಾಣದಲ್ಲಿ ಹೆದರುವ ಅವಶ್ಯಕತೆ ಇಲ್ಲ. ರಮೇಶ ಎಂ.ಎಚ್. ನಿರಾತಂಕ ಪ್ರತಿ ವರುಷದಂತೆ ಈ 2020 ಸಹ ಮುಕ್ತಾಯವಾಗಿದೆ. ಹೊಸ ವರುಷಕ್ಕೆ ಕಾಲಿಡುತ್ತಿದ್ದೇವೆ. ಕಳೆದ ವರುಷವು ನಮಗೆ ಹಲವು ಪಾಠ ಕಲಿಸಿತು. ಮತ್ತೆ ಹೊಸ ವರುಷದಲ್ಲಿ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಪ್ರಮುಖವಾಗಿ 2 ಪುಸ್ತಕಗಳನ್ನು ಬರೆಯುವುದು. ನನಗೆಂದೇ ಒಂದು ಪ್ರತ್ಯೇಕ ವೆಬ್ಸೈಟ್ ರಚಿಸಿದ್ದೇನೆ (www.rameshaniratanka.com). ನನ್ನ ಎಲ್ಲ ಚಟುವಟಿಕೆಗಳು ನನ್ನ ವೆಬ್ ಜಾಲತಾಣದಲ್ಲಿ ದಾಖಲಾಗುತ್ತಾ ಹೋಗುತ್ತವೆ.'' ಐ.ಎ.ಎಸ್. ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನ, ಎದುರಲ್ಲಿ ಕಂಡರೆ ಸಾಕು ಎದ್ದು ನಿಂತು ಕೈ ಮುಗಿವ ಜನ, ಅಬ್ಬಾ! ನೆನೆಸಿಕೊಂಡರೆ ಏನೋ ಒಂದು ತರಹದ ಸಂತೋಷ. ಇಂತಹ ಅಧಿಕಾರ, ಗೌರವ, ಮನ್ನಣೆಗಳನ್ನು ಬೇಡವೆನ್ನುವುದು ಯಾರಿಗಾದರು ಸಾಧ್ಯವೇ? ಇಲ್ಲಪ್ಪ ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಾಯಿಯಿಂದ ಕೇಳಿಬರುವ ಉತ್ತರ. ಆ ರೀತಿಯ ತೀರ್ಮಾನ ತೆಗೆದುಕೊಳ್ಳುವ ದಿಟ್ಟತನ ಕೇವಲ ಅಪರೂಪ ಮತ್ತು ಅಸಾಧ್ಯರು ಎನಿಸುವಂತಹ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಸಾಧ್ಯ.
ಸಮಾಜಕಾರ್ಯ ಅಧ್ಯಾಪನದಿಂದ ನಿವೃತ್ತಿ ಹೊಂದಿಯೇ ಹದಿನಾರು ವರ್ಷಗಳು ಉರುಳಿದವು. ನನ್ನ ಜೀವನವನ್ನು ಸಿಂಹಾವಲೋಕನ ಮಾಡಿದರೆ ಕಾಣುವುದೇನು? ಸಮಾಜಕಾರ್ಯದ ಮತ್ತು ನನ್ನ ಜೀವನಾನುಭವದ ಹೆಜ್ಜೆಗುರುತುಗಳೇನು? ಈ ಪ್ರಶ್ನೆಗಳ ಸುತ್ತಲೇ ತಿರುಗುತ್ತಿರುವ ಸ್ಥೂಲಾವಲೋಕನ ಈ ಮುಂದಿನದ್ದು.
ಪ್ರವೇಶ ಆಕಸ್ಮಿಕ ಸಮಾಜಕಾರ್ಯಕ್ಕೆ ನಾನು ಪ್ರವೇಶಿಸಿದ್ದು ಆಶ್ಚರ್ಯಕರ ರೀತಿಯಲ್ಲಿ, ಬಹುಶಃ ನನ್ನ ಅರಿವಿಲ್ಲದಂತೆಯೇ' ಗುರುತಿಸಬಹುದಾದರೆ ಸದಾಶಯ ಹೊಂದಿದ್ದ ಹಿರಿಯರೊಬ್ಬರ ಸಲಹೆ ಸೂಚನೆಯ ಮೇರೆಗೆ, ಕನ್ನಡ ಸಾಹಿತ್ಯದ ಆರಾಧಕ ಅಥವಾ ಕೃಷಿಕ ಆಗಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು, ಕವನ ಪ್ರಬಂಧ ರಚನೆಯಲ್ಲಿ ತೊಡಗಿದ್ದು, ಕನ್ನಡ ಸಾಹಿತ್ಯ ಕೃತಿಗಳನ್ನೇ ಓದುವುದರಲ್ಲಿ ಹೆಚ್ಚಿನ ಆಸಕ್ತಿ, ಆಸ್ಥೆಯನ್ನು ತಳೆದಿದ್ದೆ. ಅಂದಿನ ಮದ್ರಾಸು ಪ್ರಾಂತ್ಯಕ್ಕೆ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ನನ್ನ ಗುರುಗಳೂ ನನಗೆ ಪ್ರೋತ್ಸಾಹದ ನೆರವು ನೀಡುತ್ತಿದ್ದರು. ಇದೂ ನನ್ನ ಕನ್ನಡ ದುಡಿಮೆಗೆ ಒತ್ತಾಸೆಯಾಯ್ತು. (ಆರ್ಥಿಕ ಅನನುಕೂಲ ಮತ್ತು ಇತರ ತೊಂದರೆಗಳ ಕಾರಣದಿಂದ ಒಂದು ವರ್ಷ ನನ್ನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಿದ್ದುದರಿಂದ ಪತ್ರಿಕೋದ್ಯಮಿಯಾಗಿ ಹುಬ್ಬಳ್ಳಿ, ದಾವಣಗೆರೆ ನಗರಗಳಲ್ಲಿ ಕೆಲಸ ಮಾಡಬೇಕಾಯ್ತು) ಪ್ರೌಢಶಾಲಾ ಶಿಕ್ಷಣದ ನಂತರ ನನ್ನ ಅಣ್ಣ ಹಿ.ಮ. ನಾಗಯ್ಯನವರ ಸಹಾಯದಿಂದ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೇರಿದೆ. ಅಲ್ಲಿ ಓದುವಾಗ ಪ್ರೊ. ಕೆ.ಎಸ್. ಕೃಷ್ಣಮೂರ್ತಿ, ಪ್ರೊ. ಗೋಪಾಲಕೃಷ್ಣ ಅಡಿಗ, ಇಂಗ್ಲೆಂಡಿನ ಡೇವಿಡ್ ಹಾರ್ಸ್ ಬರೋ ಇಂಥವರ ನೆರವು ದೊರೆಯಿತು. ಅಲ್ಲಿಯೇ ಕರುಣಾಮಯಿ ಫಾದರ್ ಮುತಡಂ ಕಷ್ಟಕಾಲದಲ್ಲಿ ನೆರವಾದರು. ಆ ಅಧ್ಯಯನ ಕಾಲದಲ್ಲಿಯೇ ಕನ್ನಡದ ಕೃಷಿ ನಡೆದು ಅಂತಿಮ ಪರೀಕ್ಷೆಯಲ್ಲಿ ಒಂಭತ್ತನೆಯ ರ್ಯಾಂಕ್ ಪಡೆದುದಲ್ಲದೆ ಮೈಸೂರು ವಿಶ್ವವಿದ್ಯಾಲಯಕ್ಕೆ ಕನ್ನಡದಲ್ಲಿ ಪ್ರಥಮ ಸ್ಥಾನ ದೊರೆಕಿಸಿಕೊಂಡೆ ಎಂದು ನೆನಪು. ಆದುದರಿಂದಲೂ ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್ ಓದಲು ನನಗೆ ಸಹಜವಾಗಿಯೇ ಅವಕಾಶ ಸಿಕ್ಕಿದುದಲ್ಲದೆ ಮೆರಿಟ್ ಸ್ಕಾಲರ್‌ಷಿಪ್ ಕೂಡಾ ದೊರೆಯಿತು. ವೇದಿಕೆಯ ಮೇಲೆ ಆಸೀನರಾಗಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿರವರಾದ ಪ್ರೊ. ನರಸಿಂಹಮೂರ್ತಿ. ಎನ್, ಮಾರ್ಗದರ್ಶಕರಾದ ಪ್ರೊ. ಕೆ ಭೈರಪ್ಪ, ಇಂದಿನ ಕಾರ್ಯಕ್ರಮದ ಕೇಂದ್ರಬಿಂದುವಾದ ಡಾ|| ಸಿ.ಆರ್.ಗೋಪಾಲ್, ನನ್ನ ಆತ್ಮೀಯ ಸ್ನೇಹಿತರಾದ ಶ್ರೀ. ಸಿದ್ಧರಾಮಣ್ಣ.ಎಸ್, ಆತ್ಮೀಯರು, ಹಿರಿಯರಾದ ಪ್ರೊ. ರಾಜೇಂದ್ರಕುಮಾರ್, ನಮ್ಮ ಪ್ರೀತಿಯ ಪ್ರೊ. ರಮೇಶ್ ಬಿ., ಅನುಪಸ್ಥಿತಿಯಲ್ಲಿ ಪ್ರೊ. ಆರ್.ಶಿವಪ್ಪ, ಹಿರಿಯ ಸಾಹಿತಿಗಳಾದ ಡಾ. ಎಸ್.ಹೆಚ್. ಸತ್ಯನಾರಾಯಣ, ನಿರಾತಂಕದ ಟ್ರಸ್ಟಿಯವರಾದ ಶ್ರೀಮತಿ. ಕುಸುಮ, ನನ್ನ ಆತ್ಮೀಯ ಗೆಳೆಯರಾದ ಡಾ. ಬಿ.ಕೆ. ಕೆಂಪೇಗೌಡ ರವರೇ
ಗಂಭೀರವಾಗಿ ಪುಸ್ತಕಗಳನ್ನು ಓದುವವರು, ಬರೆಯುವವರು ವಿರಳವಾಗಿರುವ ಸಂದರ್ಭದಲ್ಲಿ ಪುಸ್ತಕ ಪ್ರಕಾಶನ ಅತ್ಯಂತ ಲಾಭ ತಂದು ಕೊಡುವ ಉದ್ದಿಮೆಯಲ್ಲ. ಆದರೂ ಸಮಾಜಕಾರ್ಯ ಕ್ಷೇತ್ರಕ್ಕೆ ಸಾಹಿತ್ಯ ಸೃಷ್ಟಿ ಮಾಡಬೇಕು ಎಂಬ ಸದುದ್ದೇಶದಿಂದ ನಿರುತ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಇದುವರೆಗೂ 100 ಕ್ಕೂ ಹೆಚ್ಚು ಕೃತಿಗಳನ್ನು ನಿರುತ ಪ್ರಕಾಶನದಿಂದ ಹೊರತರಲಾಗಿದೆ. ಈ ಪ್ರಯತ್ನದಲ್ಲಿ ಸಮಾಜಕಾರ್ಯ ಕ್ಷೇತ್ರಕ್ಕೆ ವಿಶೇಷವಾದ ಆದ್ಯತೆ ನೀಡಿ ಹತ್ತು-ಹಲವು ಸಮಾಜಕಾರ್ಯ ಕ್ಷೇತ್ರದ ಕೃತಿಗಳನ್ನು ಹೊರತಂದಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ. |